ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ 30 ವರ್ಷ……

 

ಜಗತ್ತಿನೆಲ್ಲೆಡೆ ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಈ ನವೆಂಬರ್ 30ನೇ ಹುಟ್ಟುಹಬ್ಬ ಆಚರಿಸಲಾಗುತ್ತದೆ. ಏನಿದು ಒಡಂಬಡಿಕೆಗೆ ಹುಟ್ಟುಹಬ್ಬವೆ? ಅದಕ್ಕೆ 30 ವರ್ಷಗಳಾಯ್ತೆ? ಅಚ್ಚರಿಯಾಯ್ತೆ! ಹೌದು ಈ ಒಡಂಬಡಿಕೆ ಹುಟ್ಟಿದ್ದು, ಅಂದರೆ ವಿಶ್ವಸಂಸ್ಥೆಯಲ್ಲಿ ಮಕ್ಕಳ ಹಕ್ಕುಗಳ ಒಡಂಬಡಿಕೆ ಅಧಿಕೃತವಾಗಿ ಘೋಷಣೆಯಾದದ್ದು 1989ರ ನವೆಂಬರ್ 20ರಂದು. ಈ ಒಡಂಬಡಿಕೆ ಎಲ್ಲ ಮಕ್ಕಳಿಗೆ ತಾರತಮ್ಯವಿಲ್ಲದೆ ಬದುಕಲು, ರಕ್ಷಣೆ ಹೊಂದಲು, ಶಿಕ್ಷಣ ಮಾಹಿತಿಯೊಂದಿಗೆ ಅಭಿವೃದ್ಧಿ ಹೊಂದಲು ಮತ್ತು ತಮಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶಗಳು ಹಕ್ಕಿನ ಸ್ವರೂಪದಲ್ಲಿ ಇದೆ ಎಂದು ಖಾತರಿಪಡಿಸುತ್ತದೆ.

ಪ್ರಥಮ ಜಾಗತಿಕ ಮಹಾಯುದ್ಧದ ಅನರ್ಥಗಳಿಂದಾಗಿ ಲಕ್ಷಾಂತರ ಮಕ್ಕಳು ಅನಾಥರಾದರು, ನಿರ್ವಸಿತರಾದರು, ಆಹಾರ ಮತ್ತು ಔಷಧಗಳಿಲ್ಲದೆ ಅಸುನೀಗಿದರು. ಇಂತಹದು ಆಗಬಾರದು ಮತ್ತು ಮಕ್ಕಳನ್ನು ಕುರಿತು ಜಗತ್ತಿನ ಎಲ್ಲ ವಯಸ್ಕರು, ಕುಟುಂಬಗಳು, ಜನಪ್ರತಿನಿಧಿಗಳು, ಸರ್ಕಾರಗಳು, ಸಂಸ್ಥೆಗಳು, ವ್ಯಾಪಾರೀ ಉದ್ದಿಮೆಗಳು, ನ್ಯಾಯಾಲಯಗಳು, ಮಾಧ್ಯಮಗಳು, ಎಲ್ಲರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು, ಮಕ್ಕಳ ಮೇಲೆ ಎಂತಹುದೇ ದೌರ್ಜನ್ಯಗಳನ್ನು ಮಾಡದಂತೆ, ಮಕ್ಕಳಿಗೆ ಮೋಸವಾಗದಂತೆ, ಅನ್ಯಾಯಗಳು ಜರುಗದಂತೆ ಎಚ್ಚರಿಕೆಯಿಂದ ವತರ್ಿಸಬೇಕು ಎಂದು ನಿಗದಿಪಡಿಸಿರುವುದೇ ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ. ಆಗಿನ ಯುದ್ಧದ ಭಯಾನಕತೆಯನ್ನು ಹತ್ತಿರದಿಂದ ನೋಡಿದ್ದ ಮತ್ತು ಯುದ್ಧ ನಿಲ್ಲಿಸಲು ಮತ್ತು ನಂತರ ಯುದ್ಧದಿಂದ ತೊಂದರೆಗೀಡಾದ ಮಕ್ಕಳಿಗೆ ನೆರವು ನೀಡಲು ಶ್ರಮಿಸಿದ ಎಗ್ಲಾಂಟೈನ್ ಜೆಬ್ (1845-1925) ಎಂಬ ಮಹಿಳೆ ಮತ್ತು ಆಕೆ ಕಟ್ಟಿದ ಸಂಸ್ಥೆ ಸೇವ್ ದ ಚಿಲ್ಡ್ರನ್ನ ಕಲ್ಪನೆಗಳೇ ಮಕ್ಕಳ ಹಕ್ಕುಗಳ ಒಡಂಬಡಿಕೆ.

ಪ್ರಥಮ ಜಾಗತಿಕ ಮಹಾಯುದ್ಧದ ಅನರ್ಥಗಳಿಂದಾಗಿ ಲಕ್ಷಾಂತರ ಮಕ್ಕಳು ಅನಾಥರಾದರು, ನಿರ್ವಸಿತರಾದರು, ಆಹಾರ ಮತ್ತು ಔಷಧಗಳಿಲ್ಲದೆ ಅಸುನೀಗಿದರು. ಇಂತಹದು ಆಗಬಾರದು ಮತ್ತು ಮಕ್ಕಳನ್ನು ಕುರಿತು ಜಗತ್ತಿನ ಎಲ್ಲ ವಯಸ್ಕರು, ಕುಟುಂಬಗಳು, ಜನಪ್ರತಿನಿಧಿಗಳು, ಸಕರ್ಾರಗಳು, ಸಂಸ್ಥೆಗಳು, ವ್ಯಾಪಾರೀ ಉದ್ದಿಮೆಗಳು, ನ್ಯಾಯಾಲಯಗಳು, ಮಾಧ್ಯಮಗಳು, ಎಲ್ಲರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು, ಮಕ್ಕಳ ಮೇಲೆ ಎಂತಹುದೇ ದೌರ್ಜನ್ಯಗಳನ್ನು ಮಾಡದಂತೆ, ಮಕ್ಕಳಿಗೆ ಮೋಸವಾಗದಂತೆ, ಅನ್ಯಾಯಗಳು ಜರುಗದಂತೆ ಎಚ್ಚರಿಕೆಯಿಂದ ವತರ್ಿಸಬೇಕು ಎಂದು ನಿಗದಿಪಡಿಸಿರುವುದೇ ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ. ಆಗಿನ ಯುದ್ಧದ ಭಯಾನಕತೆಯನ್ನು ಹತ್ತಿರದಿಂದ ನೋಡಿದ್ದ ಮತ್ತು ಯುದ್ಧ ನಿಲ್ಲಿಸಲು ಮತ್ತು ನಂತರ ಯುದ್ಧದಿಂದ ತೊಂದರೆಗೀಡಾದ ಮಕ್ಕಳಿಗೆ ನೆರವು ನೀಡಲು ಶ್ರಮಿಸಿದ ಎಗ್ಲಾಂಟೈನ್ ಜೆಬ್ (1845-1925) ಎಂಬ ಮಹಿಳೆ ಮತ್ತು ಆಕೆ ಕಟ್ಟಿದ ಸಂಸ್ಥೆ ಸೇವ್ ದ ಚಿಲ್ಡ್ರನ್ನ ಕಲ್ಪನೆಗಳೇ ಮಕ್ಕಳ ಹಕ್ಕುಗಳ ಒಡಂಬಡಿಕೆ.

ಸಾಮಾನ್ಯವಾಗಿ ಮಕ್ಕಳನ್ನು ಕುರಿತು ಮಾತನಾಡುವವರು ಬರೆಯುವವರೆಲ್ಲಾ ಇಂದಿನ ಮಕ್ಕಳು ಮುಂದಿನ ಪ್ರಜೆಗಳು ಎಂದು ಹೇಳುವುದು ರೂಢಿ. ಆ ಮಾತಿನಲ್ಲಿ ಉದಾತ್ತವಾದ ಕಲ್ಪನೆಗಳು ಇರಬಹುದು. ಅಡ್ಡಿಯಿಲ್ಲ. ಆದರೆ ಭಾರತ ಸಂವಿಧಾನದ ಪರಿಚ್ಛೇದ 5ರಂತೆ ಮಕ್ಕಳಿಗೆ ಹುಟ್ಟಿನಿಂದಲೇ ಪೌರತ್ವ ಸಿಗುತ್ತದೆ. ಮಕ್ಕಳು ಹುಟ್ಟುತ್ತಲೇ ಈ ದೇಶದ ಪ್ರಜೆಗಳು. ಮತ್ತೆ ಅಚ್ಚರಿಯಾಯಿತೆ? ಅಷ್ಟೇ ಅಲ್ಲ, ಹುಟ್ಟುತ್ತಲೇ ಈ ದೇಶದ ಪ್ರಜೆಗಳೆಲ್ಲರಿಗೆ ಸಂವಿಧಾನ ಖಾತರಿ ಮಾಡಿರುವ ಎಲ್ಲ ಹಕ್ಕುಗಳೂ ಮಕ್ಕಳಿಗೆ ಇದೆ – ಬಹಳ ಮುಖ್ಯವಾಗಿ ಸಾಂವಿಧಾನಿಕ ಪರಿಹಾರದ ಹಕ್ಕುಗಳು ಮಕ್ಕಳಿಗೆ ಇದೆ. ಮುಂದಿನ ಪ್ರಜೆಗಳು ಎಂಬ ಘೋಷಣೆಯ ಹಿಂದಿರುವ ಚಿಂತನೆಗಳನ್ನು ನಿರ್ಲಕ್ಷಿಸದೆ ಎಲ್ಲ ರೀತಿಯ ಸೇವಾ ಸೌಲಭ್ಯಗಳನ್ನು ಒದಗಿಸುವ ಪ್ರತಿ ವ್ಯವಸ್ಥೆ, ಸರ್ಕಾರದ ಸಿಬ್ಬಂದಿ ಹಾಗೂ ಈ ಸಮಾಜ ಮಕ್ಕಳು ಹಕ್ಕುಗಳಿರುವ ಪ್ರಜೆಗಳು ಎಂದು ಪರಿಗಣಿಸಲೇಬೇಕಿದೆ.

ಭಾರತ ದೇಶ ಈ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ 1992ರಲ್ಲಿ ವಿಶ್ವಸಂಸ್ಥೆಯೆದುರು ಒಪ್ಪಿಕೊಂಡಿತು. ಅಂದರೆ ದೇಶದಲ್ಲಿನ ಯಾವುದೇ ಮಗುವಿನ ಹಕ್ಕುಗಳನ್ನು ಉಲ್ಲಂಘನೆಯಾಗದಂತೆ ಎಚ್ಚರ ವಹಿಸುವುದಾಗಿ ಭರವಸೆ ಕೊಟ್ಟಿದೆ. ಇದಕ್ಕಾಗಿ ಕಾನೂನುಗಳಲ್ಲಿ ಮಾಪರ್ಾಡು ಇಲ್ಲವೇ ಹೊಸ ಕಾಯಿದೆಗಳನ್ನು ನಿರ್ಮಿಸುವುದು, ಕಾರ್ಯಕ್ರಮ, ಯೋಜನೆಗಳನ್ನು ಕೈಗೊಳ್ಳುವುದು, ಎಲ್ಲ ವಯಸ್ಕರಿಗೆ ಮತ್ತು ವ್ಯವಸ್ಥೆಗಳಿಗೆ ಮಕ್ಕಳ ಹಕ್ಕುಗಳನ್ನು ಕುರಿತು ಸೂಕ್ಷ್ಮಗೊಳಿಸುವುದು ಹಾಗೂ ಮಕ್ಕಳಿಗೂ ಅವರಿಗಿರುವ ಹಕ್ಕುಗಳನ್ನು ಹೇಗೆ ಜವಾಬ್ದಾರಿಯಿಂದ ಚಲಾಯಿಸಬೇಕು ಎಂದು ಪ್ರಚಾರ ಮಾಡುವುದಕ್ಕೆ ಸರ್ಕಾರ ಬದ್ಧವಾಗಿದೆ. ಮಕ್ಕಳು ತಾಯ ಗರ್ಭದಲ್ಲಿ ವಿಕಾಸವಾಗುತ್ತಿರುವ ಕಾಲದಿಂದ ಹಿಡಿದು ಮಕ್ಕಳಿಗೆ 18 ವರ್ಷ ಪೂರೈಸುವ ತನಕ ಯಾವುದೇ ಲಿಂಗ, ಜಾತಿ, ಧರ್ಮ, ಭಾಷೆ, ಬಣ್ಣ, ಅಂಗವಿಕಲತೆ, ಪೋಷಕರ ಹಿನ್ನೆಲೆ, ಇತ್ಯಾದಿ ಯಾವುದೇ ವಿಚಾರ ಮಕ್ಕಳಿಗೆ ಅವರ ಹಕ್ಕುಗಳನ್ನು ಅನುಭವಿಸುವುದಕ್ಕೆ ಅಡ್ಡಿ ಆಗಬಾರದು ಎಂಬುದು ಈ ಒಡಂಬಡಿಕೆ ಮತ್ತು ಒಡಂಬಡಿಕೆಯನ್ನು ಒಪ್ಪಿರುವ ಸರ್ಕಾರದ ಆಶಯ. ಉದಾಹರಣೆಗೆ, ಶಾಲೆಗೆ ಬರುವ ಎಲ್ಲ ಮಕ್ಕಳ ರಕ್ಷಣೆ ಮತ್ತು ಅಭಿವೃದ್ಧಿಯ ಜವಾಬ್ದಾರಿ ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರು ಮತ್ತು ಶಿಕ್ಷಕೇತರರದ್ದು. ಇದಕ್ಕಾಗಿಯೇ, ಶಾಲಾ ಮಕ್ಕಳ ರಕ್ಷಣಾ ನೀತಿಯನ್ನು ಅಳವಡಿಸಿಕೊಳ್ಳಲು ಕನರ್ಾಟಕ ಸಕರ್ಾರ ನಿದರ್ೇಶಿಸಿದೆ. ಇಂತಹ ನೀತಿ ನಿಯಮಗಳನ್ನು ಎಲ್ಲೆಡೆ ಜಾರಿಗೊಳಿಸಲಾಗುತ್ತಿದೆ.

ಮಕ್ಕಳ ಹಕ್ಕುಗಳನ್ನು ತಳಮಟ್ಟದಲ್ಲಿ ಜಾರಿಗೊಳಿಸಲೆಂದೇ ಶಾಲಾ ಮಕ್ಕಳ ಹಕ್ಕುಗಳ ಸಂಘದ ಕಲ್ಪನೆ ಮತ್ತು ಗ್ರಾಮ ಪಂಚಾಯತಿಗಳ ಮಟ್ಟದಲ್ಲಿ ಮಕ್ಕಳ ಹಕ್ಕುಗಳ ಗ್ರಾಮಸಭೆಯನ್ನು ಆಯೋಜಿಸಲಾಗುತ್ತಿದೆ. ಈ ವೇದಿಕೆಗಳಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುತ್ತಿರುವ ಪರಿಸ್ಥಿತಿಗಳು ಪ್ರಕರಣಗಳನ್ನು ಚಚರ್ೆಗೆ ತಂದು ತಳಮಟ್ಟದಿಂದಲೇ ಪರಿಹಾರ ಪಡೆಯಲು ಅತ್ಯುತ್ತಮ ವ್ಯವಸ್ಥೆಯಾಗಿದೆ. ಈ ಮೂಲಕ ಮಕ್ಕಳ ಅಪೌಷ್ಟಿಕತೆ ತಡೆ, ಬಾಲಕಾರ್ಮಿಕ ಪದ್ಧತಿ, ಮಕ್ಕಳ ದೈಹಿಕ, ಲೈಂಗಿಕ ದುರುಪಯೋಗ, ಬಾಲ್ಯವಿವಾಹ, ಮಕ್ಕಳ ಸಾಗಣೆಯೇ ಮೊದಲಾದವುಗಳನ್ನು ತಡೆಗಟ್ಟಬಹುದು. ಎಲ್ಲ ಮಕ್ಕಳು ಶಾಲೆಗೆ ದಾಖಲಾಗಿ, ಹಾಜರಾಗಿ ಶಿಕ್ಷಣದೊಂದಿಗೆ ವಿಕಸನ ಹೊಂದಲು ಅವಕಾಶವಾಗುತ್ತದೆ.

ಇಂತಹ ಮಕ್ಕಳ ಹಕ್ಕುಗಳ ಗ್ರಾಮಸಭೆಗಳನ್ನು ಪ್ರತಿ ಪಂಚಾಯತಿಗಳು ಸೂಕ್ತ ಪ್ರಚಾರ ಮತ್ತು ಕ್ರಮಗಳೊಂದಿಗೆ ನವೆಂಬರ್ ತಿಂಗಳಿನಲ್ಲಿ ಆಯೋಜಿಸಬೇಕಿದೆ. ಶಾಲಾ ಮಕ್ಕಳು ಈ ಸಭೆಗಳಲ್ಲಿ ಭಾಗವಹಿಸಿ ತಮ್ಮ ಸಮಸ್ಯೆ/ಸಲಹೆಗಳನ್ನು ತಿಳಿಸುವಂತೆ ಮಕ್ಕಳನ್ನು ಶಾಲೆಗಳು ಪ್ರೋತ್ಸಾಹಿಸುವ ಮೂಲಕ ಅವರ ಭಾಗವಹಿಸುವ ಹಕ್ಕುಗಳನ್ನು ಖಾತರಿಪಡಿಸಬೇಕು.

ಮಕ್ಕಳ ಹಕ್ಕುಗಳ ಒಡಂಬಡಿಕೆಯಲ್ಲಿರುವ ವಿಚಾರಗಳು ಕೇವಲ ಭಾಷಣದ ವಸ್ತುಗಳಾಗದೆ ಮಕ್ಕಳ ಬದುಕು ಭವಿಷ್ಯವನ್ನು ಉಜ್ವಲಗೊಳಿಸುವ ದಾರಿದೀಪಗಳಾಗಿವೆ. ಅದನ್ನು ಜಾರಿಗೊಳಿಸುವ ಜವಾಬ್ದಾರಿ ಪ್ರತಿಯೊಬ್ಬ ವಯಸ್ಕರದ್ದಾಗಿದೆ.

ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ 54 ಪರಿಚ್ಛೇದಗಳನ್ನು ಹೊಂದಿದೆ. ಅವೆಲ್ಲವನ್ನು ನಾಲ್ಕು ಮುಖ್ಯ ಗುಂಪುಗಳಲ್ಲಿ ನಾವು ಅರ್ಥ ಮಾಡಿಕೊಳ್ಳಬಹುದು :
1. ಮಕ್ಕಳ ಬದುಕುವ ಹಕ್ಕುಗಳು : ಪ್ರತಿಯೊಂದು ಮಗುವಿಗೂ ಜನ್ಮ ಹೊಂದುವ, ಜೀವಿಸುವ, ಉತ್ತಮ ಆರೋಗ್ಯ ಸೇವೆ, ಪೌಷ್ಟಿಕ ಆಹಾರ ಪಡೆಯುವ, ಒಂದು ಹೆಸರು ಹೊಂದಿರುವ, ತಾನು ಒಂದು ದೇಶದ ಪ್ರಜೆ ಎಂದು ಗುರುತಿಸಿಕೊಳ್ಳುವ ಹಕ್ಕು.

2. ಮಕ್ಕಳ ರಕ್ಷಣೆ ಹೊಂದುವ ಹಕ್ಕುಗಳು : ದಬ್ಬಾಳಿಕೆ, ತೊಂದರೆ, ಕಿರುಕುಳ, ಹಿಂಸೆಗಳ ವಿರುದ್ಧ, ತುರ್ತು ಸಂದರ್ಭಗಳಲ್ಲಿ ಮತ್ತು ಸಶಸ್ತ್ರ ಘರ್ಷಣೆಗಳಾದಲ್ಲಿ ರಕ್ಷಣೆ.
3. ಮಕ್ಕಳ ಅಭಿವೃದ್ಧಿ ಹೊಂದುವ ಹಕ್ಕುಗಳು : ಶಿಕ್ಷಣ, ಶೈಶವದಲ್ಲಿ ಬೆಳೆಯಲು ಅವಕಾಶ, ಆರೋಗ್ಯ ರಕ್ಷಣೆ, ಸಾಮಾಜಿಕ ಭದ್ರತೆ, ಬಿಡುವು, ಮನೋರಂಜನೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಅವಕಾಶ.
4. ಮಕ್ಕಳ ಭಾಗವಹಿಸುವಿಕೆಯ ಹಕ್ಕುಗಳು : ಮಕ್ಕಳ ಅಭಿಪ್ರಾಯಗಳಿಗೆ ಮನ್ನಣೆ, ಸ್ವಾತಂತ್ರ್ಯ, ಮಾಹಿತಿಯ ಲಭ್ಯತೆ, ಚಿಂತನೆಗೆ, ಬುದ್ಧಿ ಬೆಳವಣಿಗೆಗೆ ಅವಕಾಶ ಮತ್ತು ಸಂಘಟಿತರಾಗುವ ಹಕ್ಕುಗಳು. ಬಹಳ ಮುಖ್ಯವಾಗಿ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಪರಿಚ್ಛೇದ 42ರಲ್ಲಿ ಹೇಳಿರುವಂತೆ, ಮಕ್ಕಳ ಹಕ್ಕುಗಳ ಒಡಂಬಡಿಕೆಯಲ್ಲಿನ ವಿಧಿಗಳು, ವಿಚಾರಗಳನ್ನು ಸೂಕ್ತವಾದ ವಿಧಾನಗಳು ಮತ್ತು ಮಾಧ್ಯಮಗಳ ಮೂಲಕ ದೇಶದ ಎಲ್ಲ ಮಕ್ಕಳು ಮತ್ತು ವಯಸ್ಕರಿಗೆ ತಲುಪಿಸಲು ಸರ್ಕಾರಗಳೂ ಕಟಿಬದ್ಧವಾಗಿವೆ ಮತ್ತು ಪರಿಚ್ಛೇದ 44ರಲ್ಲಿ ಹೇಳಿರುವಂತೆ ಭಾರತ ಸರ್ಕಾರವು ದೇಶದಲ್ಲಿ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಬದ್ಧತೆಗಳನ್ನು ಹೇಗೆ ಜಾರಿ ಮಾಡಲಾಗಿದೆ ಎಂದು ವಿಶ್ವಸಂಸ್ಥೆಗೆ ವರದಿಯನ್ನು ಪ್ರತಿ ಐದು ವರ್ಷಗಳಿಗೊಮ್ಮೆ ಸಲ್ಲಿಸಬೇಕಿದೆ. ಮಕ್ಕಳ ಹಕ್ಕುಗಳಿಗೆ 30 ವರ್ಷಗಳು ಆಗಿರುವ ಸಂದರ್ಭದಲ್ಲಿ ಇಡೀ ಜಗತ್ತಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಸಕರ್ಾರ ಮತ್ತು ಸರ್ಕಾರೇತರರು ಒಟ್ಟಾಗಿ ಎಲ್ಲೆಡೆ ನವೆಂಬರ್ 20ರಂದು ನೀಲ ಬಣ್ಣದಲ್ಲಿ ಆಚರಿಸಿ ಸಂಭ್ರಮಿಸುತ್ತಿದ್ದಾರೆ. ಮಕ್ಕಳ ಹಕ್ಕುಗಳನ್ನು ಕುರಿತು ಜನರಿಗೆ ತಿಳಿಸುವ ಮೆರವಣಿಗೆಗಳು, ಚಚರ್ಾಕೂಟಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಸ್ಪರ್ಧೆಗಳು, ಪ್ರಕಟಣೆಗಳು, ಇತ್ಯಾದಿ ನಡೆಸುತ್ತಿದ್ದಾರೆ. ಪ್ರತಿ ಕಾರ್ಯಕ್ರಮ, ಚರ್ಚೆಗಳಲ್ಲಿ ಮುಖ್ಯವಾಗಿ ಮಕ್ಕಳ ಈಗಿನ ಪರಿಸ್ಥಿತಿಗಳನ್ನು ಅವಲೋಕಿಸುವ ಮತ್ತು ಮುಂದಿನ ದಿನಗಳಲ್ಲಿ ಮಕ್ಕಳ ಬದುಕನ್ನು ಇನ್ನೂ ಹಸನುಗೊಳಿಸುವ ಮತ್ತು ಅರ್ಥಪೂರ್ಣವಾಗಿಸುವ ದಿಶೆಯಲ್ಲಿ ವಯಸ್ಕರು, ವ್ಯವಸ್ಥೆ, ಸರ್ಕಾರದ ಕರ್ತವ್ಯವನ್ನು ನೆನಪಿಸುವುದು ಮುಖ್ಯವಾಗುತ್ತಿದೆ.

ಬನ್ನಿ ನಮ್ಮ ರಾಜ್ಯದ ಎಲ್ಲ ಶಾಲೆಗಳಲ್ಲಿ ನೀಲ ವರ್ಣವನ್ನು ರಾರಾಜಿಸುತ್ತ ಮಕ್ಕಳ ಹಕ್ಕುಗಳ 30 ವರ್ಷಗಳನ್ನು ಆಚರಿಸೋಣ.