ವಿಶೇಷ ಚೇತನರ ವಿಶ್ವ ದಿನಾಚರಣೆ

ವಿಶೇಷ ಚೇತನರೂ ಕೂಡಾ ಮನುಷ್ಯರೇ. ಅವರಿಗೂ ಭಾವನೆಗಳಿವೆ, ಜಗತ್ತಿನ ಆಗುಹೋಗುಗಳಿಗೆ ಸ್ಪಂದಿಸುವ ಬೌದ್ಧಿಕ ಸಾಮಥ್ರ್ಯವಿದೆ. ಆದರೆ ಬಹುತೇಕ ಸಂದರ್ಭಗಳಲ್ಲಿ ಅವರನ್ನು ಪ್ರತ್ಯೇಕವಾಗಿ ಪರಿಗಣಿಸುವ ಪರಿಪಾಠವೂ ಕೆಲವೆಡೆ ಕಾಣಿಸುತ್ತಿದೆ. ಅಥವಾ ಕೆಲವೆಡೆ ಅವರಿಗೆ ಇನ್ನಿಲ್ಲದ ಅನುಕಂಪ ತೋರುವುದೂ ಇದೆ ಇದು ತಪ್ಪು. ವಿಶೇಷ ಚೇತನರಿಗೂ ಸ್ವಾಭಿಮಾನದಿಂದ ಬದುಕುವ ಹಕ್ಕಿದೆ. ಅವರು ಸಮಾಜದ ಮುಖ್ಯವಾಹಿನಿಗಳಲ್ಲಿ ಗುರುತಿಸಿಕೊಳ್ಳಬಲ್ಲರು. ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಮಾಹಿತಿ ತಂತ್ರಜ್ಞಾನ, ಮನೊರಂಜನೆ ಮುಂತಾದ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಬಲ್ಲರು. ವಿಶೇಷವಾದ ಸಾಧನೆಯನ್ನು ಮಾಡಬಲ್ಲರು. ಸಮಾಜದಲ್ಲಿ ಅವರ ಮಹತ್ವ ಜನರಿಗೆ ಗೊತ್ತಾಗಬೇಕು ಎಂಬ ಉದ್ದೇಶದಿಂದಲೇ ವರ್ಷದ ಒಂದು ದಿನವನ್ನು ಅವರಿಗಾಗಿ ಮೀಸಲಾಗಿರಿಸಲಾಗಿದೆ. ಅದುವೇ ಡಿಸೆಂಬರ್ 3. ಇದು ಜಗತ್ತಿನೆಲ್ಲೆಡೆ ವಿಶ್ವ ವಿಶೇಷ ಚೇತನರ ದಿನವನ್ನಾಗಿ ಆಚರಿಸಲಾಗುತ್ತದೆ.

80ರ ದಶಕ ಆರಂಭಗೊಳ್ಳುವವರೆಗೂ ವಿಶೇಷ ಚೇತನರನ್ನು ಗುರುತಿಸಬಹುದಾದ ಅವರು ಆಚರಿಸಿಕೊಳ್ಳಬಹುದಾದ ಯಾವುದೇ ಸಾಂಕೇತಿಕ ದಿನವನ್ನು ಅಧಿಕೃತವಾಗಿ ಘೋಷಿಸಿದ್ದಿರಲಿಲ್ಲವೆಂಬುದು ಆ ಸಮುದಾಯಕ್ಕೆ ತಿಳಿದ ಸಂಗತಿಯೇ ಆಗಿದೆ. ಆದರೆ ವಿಶ್ವಮಾನ್ಯ ಲೂಯಿ ಬ್ರೈಲ್ ಅವರ ಹಾಗೂ ಹೆಲನ್ ಕೆಲರ್ ಆವರ ಹುಟ್ಟು ಹಬ್ಬಗಳನ್ನು ವಿಶೇಷ ಚೇತನರು ಆಗೊಮ್ಮೆ ಈಗೊಮ್ಮೆ ಸಂಘ ಸಂಸ್ಥೆಗಳ ಮೂಲಕ ಆಚರಿಸಿ ನಿಜವಾದ ಅರ್ಥದಲ್ಲಿ ಸಂಭ್ರಮಿಸುತ್ತಿದ್ದುದು ಇತಿಹಾಸದಲ್ಲಿ ತಿಳಿದಿರುವ ಅಂಶ.

1981ರವರೆಗೂ ಆಚರಣೆಗಳನ್ನು ಕಂಡರಿಯದ ವಿಶೇಷ ಚೇತನರ ಸಮುದಾಯವು 1981ರ ತರುವಾಯ ಅಂತಾರಾಷ್ಟ್ರೀಯ ವಿಶೇಷ ಚೇತನರ ದಿನಾಚರಣೆಯನ್ನು ಆಚರಿಸಿಕೊಳ್ಳಲು ಆರಂಭಿಸಿತು. ವಿಶೇಷ ಚೇತನರರನ್ನು ಸಾಮಾಜಿಕವಾಗಿ ಗುರುತಿಸುವ, ಸೂಕ್ತ ಸ್ಥಾನಮಾನಗಳನ್ನು ಕಲ್ಪಿಸಿಕೊಡುವ ಸದುದ್ದೇಶದಿಂದ ವಿಶ್ವ ಸಂಸ್ಥೆಯು 1981 ರ ವರ್ಷವನ್ನು ಅಂತಾರಾಷ್ಟ್ರೀಯ ವಿಶೇಷ ಚೇತನರ ವರ್ಷವೆಂದು ಅಧಿಕೃತವಾಗಿ ಘೋಷಣೆ ಮಾಡಿತು.

ಸುಮಾರು ಹನ್ನೆರಡು ವರ್ಷಗಳವರೆಗೆ ನಡೆದ ಈ ಬಗೆಯ ಸ್ಪಷ್ಟ ಆಚರಣೆ ಕಡೆಗೂ ಒಂದು ನಿದರ್ಿಷ್ಟ ಸ್ವರೂಪವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು. 1993ರ ಏಷ್ಯಾ ರಾಷ್ಟ್ರಗಳ ಬೀಜಿಂಗ್ ಶೃಂಗ ಸಭೆಯಲ್ಲಿ (ಏಷ್ಯಾ ಫೆಸಿಫಿಕ್ ಕಾನ್ಫೆರೆನ್ಸ್) ನಿದರ್ಿಷ್ಟ ದಿನಾಂಕವನ್ನು ಘೋಷಿಸಲಾಯಿತು.

ಈ ದಿನದಂದು ಜಗತ್ತಿನಲ್ಲಿರುವ ಅನೇಕ ವಿಶೇಷ ಚೇತನರ ಯಶೋಗಾಥೆಗಳನ್ನು ಪ್ರಚಾರ ಮಾಡಲಾಗುತ್ತದೆ. ಜೊತೆಗೆ ಅವರ ಸ್ವಾವಲಂಬನೆ ಮತ್ತು ಯೋಗಕ್ಷೇಮವನ್ನು ಹೆಚ್ಚಿಸುವ ಕಾರ್ಯಕ್ರಮಗಳು ನಡೆಯುತ್ತವೆ. ಅವರನ್ನು ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದ ಮುಖ್ಯವಾಹಿನಿಗಳಿಗೆ ಸೇರಿಸುವ ಕುರಿತಂತೆ ಜನಜಾಗೃತಿಯನ್ನು ಮೂಡಿಸಲಾಗುತ್ತದೆ. ಪ್ರತಿ ವರ್ಷ ಈ ದಿನವನ್ನು ವಿವಿಧ ವಿಷಯಗಳಡಿಯಲ್ಲಿ ಆಚರಿಸಲಾಗುತ್ತದೆ. ವಿಶೇಷ ಚೇತನರಿಗೂ ಸಮಾಜದ ಇತರ ವ್ಯಕ್ತಿಗಳಂತೆ ಸಮಾನವಾದ ಅವಕಾಶಗಳು ಸಿಗಬೇಕು, ಅವರಿಗೆ ಯೋಗ್ಯವಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂಬುದೇ ಈ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ.ಪ್ರತಿ ವರ್ಷದ ಮುಂಗಡ ಪತ್ರದಲ್ಲಿ ವಿಶೇಷ ಚೇತನರಿಗೂ ಸಾಮಾಜಿಕ ಭದ್ರತೆ ಪಿಂಚಣಿಯನ್ನು ಹೆಚ್ಚಿಸುತ್ತಿರುವುದೇ ಅವರಿಗೆ ಸಕರ್ಾರದ ವತಿಯಿಂದ ನೀಡಲಾಗುತ್ತಿರುವ ದೊಡ್ಡ ಕೊಡುಗೆ!